1.1.2020 ರಿಂದ ಹೆಚ್ಚುವರಿ ಕಂತು ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರ ಬಿಡುಗಡೆಗೆ ಸಂಪುಟದ ಅನುಮೋದನೆ

1.1.2020 ರಿಂದ ಹೆಚ್ಚುವರಿ ಕಂತು ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರ ಬಿಡುಗಡೆಗೆ ಸಂಪುಟದ ಅನುಮೋದನೆ

1.1.2020 ರಿಂದ ಹೆಚ್ಚುವರಿ ಕಂತು ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರ ಬಿಡುಗಡೆಗೆ ಸಂಪುಟದ ಅನುಮೋದನೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹೆಚ್ಚುವರಿ ಕಂತಿನ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ತುಟ್ಟಿ ಭತ್ಯೆ ಪರಿಹಾರವನ್ನು ಪಿಂಚಣಿದಾರರಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು, 01.01.2020 ರಿಂದ ಅನ್ವಯವಾಗುವಂತೆ ಈ ಭತ್ಯೆಯನ್ನು ನೀಡಲಾಗುವುದು. ಇದರಿಂದ ತುಟ್ಟಿ ಭತ್ಯೆಯು ಪ್ರಸ್ತುತ ಮೂಲ ವೇತನ / ಪಿಂಚಣಿಯ ಮೇಲಿರುವ ಶೇ.17 ರ ಮೇಲೆ ಶೇ.4 ರಷ್ಟು ಹೆಚ್ಚಳವಾಗಲಿದೆ.

ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರದಿಂದಾಗಿ ಬೊಕ್ಕಸಕ್ಕೆ ವಾರ್ಷಿಕ 12,510.04 ಕೋ.ರೂ. ಮತ್ತು 2020-21ರ ಆರ್ಥಿಕ ವರ್ಷದಲ್ಲಿ 14,595.04 ಕೋ. ರೂ.ಗಳು ವೆಚ್ಚವಾಗುತ್ತದೆ. (ಜನವರಿ, 2020 ರಿಂದ ಫೆಬ್ರವರಿ, 2021 ರವರೆಗೆ 14 ತಿಂಗಳ ಅವಧಿಗೆ). ಇದರಿಂದ ಸುಮಾರು 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65.26 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ಹೆಚ್ಚಳವು ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿರುದೆ. ಇದು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದೆ.

LEAVE A REPLY

Please enter your comment!
Please enter your name here